ಐಸೊಲೆಪಿಸ್ ಗ್ರಾಸಿಲಿಸ್: ಸೈಪರೇಸಿ ಕುಟುಂಬದ ಐಸೊಲೆಪಿಸ್ ಜಾತಿಯ ಒಂದು ಪ್ರಭೇದ. ಹೆಚ್ಚು ತೇವಾಂಶವಿರುವ ಪ್ರದೇಶಗಳಲ್ಲಿ ಹುಲ್ಲಿನಂತೆ ಬೆಳೆಯುವ ಒಂದು ಅಲಂಕಾರಸಸ್ಯ. ಇದನ್ನು ಉದ್ಯಾನವನಗಳಲ್ಲೂ ಹೆಚ್ಚು ತೇವಾಂಶವಿರುವ ಇತರ ಸ್ಥಳಗಳ ಅಂಚುಗಳಲ್ಲೂ ಬೆಳೆಸುತ್ತಾರೆ. ಕೆಲವು ಸಾರಿ ಇದನ್ನು ಕುಂಡಗಳಲ್ಲೂ ಬೆಳೆಸಿ ಸಮಾರಂಭಗಳಲ್ಲಿ ಅಲಂಕಾರವಸ್ತುಗಳನ್ನಾಗಿ ಬಳಸುವುದುಂಟು.

ಇದು 1'-1ಳಿ’ ಎತ್ತರ ಬೆಳೆಯುವ ಬಹುವಾರ್ಷಿಕ ಪುರ್ಣಸಸಿ. ಕಾಂಡದಲ್ಲಿ ಗಿಣ್ಣುಗಳಿವೆ. ನಡುಗಿಣ್ಣು ಟೊಳ್ಳು. ತುದಿಯಲ್ಲಿ ತುರಾಯಿ ಆಕಾರದ ಹೂಗೊಂಚಲಿದೆ. ಸಸ್ಯ ಎಳೆಯದಾಗಿದ್ದಾಗ ನೇರವಾಗಿ ನಿಂತಿದ್ದು. ವಯಸ್ಸಾದ ಅನಂತರ ಬಾಗುತ್ತದೆ. ಕೆಲವು ಸಸ್ಯಗಳಲ್ಲಿ ಎಲೆಗಳು ಇರುವುದಿಲ್ಲ, ಇದ್ದರೂ ಬಹು ಚಿಕ್ಕವಾಗಿರುತ್ತವೆ. ಸಸ್ಯದ ತುದಿಯಲ್ಲಿ ಅನೇಕ ಚೂಪು ತುದಿಯ ಸ್ಪೈಕ್ ಹೂಗೊಂಚಲುಗಳಿವೆ. ಅವುಗಳ ಮಧ್ಯೆ ಚಿಕ್ಕದಾಗಿರುವ ಉಪಎಲೆಗಳು ಇವೆ.                                         (ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ